ಈ ಕವಿತೆಯನ್ನು ಅಂತರಾಷ್ಟ್ರೀಯ ಮಹಿಳ ದಿನದಂದು ನನ್ನ ಗೆಳತಿ ಬರೆದದ್ದು. ನಾನು ಕನ್ನಡದಲ್ಲಿ ಲೇಖನಗಳನ್ನು ಬರೆದದ್ದನ್ನು ಕಂಡು 'Guest Post' ಆಗಿ ಇದನ್ನು ನನಗೆ ಕಳುಹಿಸಿದರು. ಈ ಕವಿತೆಯನ್ನು ಓದಿದ ನನಗೆ ಇದನ್ನು ನನ್ನ ಬ್ಲಾಗ್-ನಲ್ಲಿ ಹಾಕದೆ ಇರಲು ಅಸಾಧ್ಯವೆಂದೆನೆಸಿತು. ಕೂಡಲೆ ಇದನ್ನು ಕನ್ನಡದಲ್ಲಿ ಟೈಪ್ ಮಾಡಿದೆ. ಟೈಪ್ ಮಾಡಿದ ಮೇಲೆ ತಡವೇಕೆ ಎಂದು ಬಹಿರಂಗಪಡಿಸಿದೆ. ಇದನ್ನು ಓದಿದವರು ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಟಿಪ್ಪಣಿ(comment ) ಮೂಲಕ ಕಳುಹಿಸಿ.
ನನ್ನ ಸ್ನೇಹಿತೆಯ ಬ್ಲಾಗ್-ನ ಲಿಂಕ್ : rashmiandi
ನನ್ನ ಬಣ್ಣಿಸಿದವರು ಹಲವರು
ಒಬ್ಬನಂದ, ನೀನೆಷ್ಟು ಚಂದ
ನಿನ್ನನ್ನು ಬಣ್ಣಿಸಲು ಸಾಲದು ಪದ ಬಂಧ
ಕವಿ ಅಂದ, ನಿನ್ನ ಮೊಗವು ಕಮಲ
ನನ್ನ ಮನಸಲ್ಲಿ ಕುಣಿವ ನವಿಲ
ರವಿವರ್ಮನ ಕುಂಚದ ಕಲೆಯು ನೀ
ಆ ಸೂರ್ಯನಿಗಿಂತ ಮಿಂಚುವ ಬೆಳಕು ನೀ
ಹಾಸ್ಯಕಾರನೆಂದ ಅವಳು ಬಿಡಿಸಲಾಗದ ಒಗಟು
ಅರಿಯದೆ ಅವಳ ಮನಸ್ಸು, ಆಯಿತು ಎಡವಟ್ಟು
ನಿನ್ನ ಹೇಗೆ ಬಣ್ಣಿಸಲಿ ಮತ್ತೆ
ನಿನಗೆ ಇಷ್ಟವಾಗುವ ಹಾಗೆ
ತಾಯಿಯಾಗಿ ಹಡೆದು ಜೀವ ಕೊಟ್ಟೆ
ಜೊತೆಯಲ್ಲಿ ಹುಟ್ಟಿ ಪ್ರೀತಿಯ ನೆಟ್ಟೆ
ಗೆಳತಿಯಾಗಿ ಸೋತ ಮನಸ್ಸಿಗೆ ತಂದೆ ಸುಗ್ಗಿ
ಜೋತೆಗಾರ್ತಿಯಾಗಿ ತಂದೆ ಬಾಳಿಗೆ ಹುಗ್ಗಿ
ನೀನಾಡುವ ಪಾತ್ರಗಳು ಹಲವಾರು
ಅದ ವರ್ಣಿಸಲು ಸಾಲದು ಪದಗಳು ನೂರಾರು
ಬಣ್ಣಿಸಲೇಬೇಕಿಂದು
ಆದರೆ ತಿಳಿದಿಲ್ಲ ಹೇಗೆಂದು
ನಿನ್ನ ಹೇಗೆ ಬಣ್ಣಿಸಲಿ ಮತ್ತೆ
ನಿನಗೆ ಇಷ್ಟವಾಗುವ ಹಾಗೆ
Labels: Guest, Kannada, Poetry