ಬರೆಯಲೇ ನಾನೊಂದು ಕವಿತೆ 
ಈ ಬೆಳದಿಂಗಳ ಬೆಳಕಿನಲಿ 
ನಿನ್ನ ಗುಂಗಲ್ಲೇ ಪದಗಳ ನಾ ಮರೆತೇ 
ಪ್ರೀತಿಯ ಬಣ್ಣವಿದೆ ಈ ಪದಗಳಲಿ 
ನಿನ್ನ ಗೆಜ್ಜೆಯ ಸವಿನಾದ 
ಕೇಳುತಲೇ  ಕುಳಿತಿರುವೆ 
ಮಾತುಗಳು ನಿನ್ನವು ಬಲು ಇಂಪಾದ 
ಈ ಪದಗಳಲ್ಲೇ ನಿನ್ನ ನೆನೆದಿರುವೆ 
ನಿನ್ನ ನಡುವಿನ ನೃತ್ಯ 
ನೆನೆಯುತಲೇ ನಾ ಹಾಡುವೆ 
ನಿನಗಿಂತ ಚಂದ ಯಾರಿಲ್ಲ, ಇದು ಸತ್ಯ 
ನೀ ಮರೆಯಾಗಿ, ಎಲ್ಲಿರುವೆ?
 
Labels: Kannada, Poetry