ನಾ ಬರೆಯುವ ಕವನಗಳನು

ಯತ್ನಿಸುವೆ ನಾ ಬರೆಯಲು ಒಂದು ಕವಿತೆ  
ಆಗಲಿ ಇದು ಒಂದು ಚಿತ್ರಗೀತೆ 
ಇರುವುದೀ ಆಸೆ ಬಹುದಿನಗಳಿಂದ 
ನಾನಾಗಿರುವೆ ಕವಿ ನಿನ್ನ ನೆನಪಿನಿಂದ 

ಅ ಆ ಇ ಈ ಅಕ್ಷರಗಳ ಜೋಡಿಸಿ ನಾ ಬರೆದೆ
ಪದಗಳ ಈ ಉಯ್ಯಾಲೆ 
ಇದ ಹಾಡುತ ನಾ ನಿನಗೆ ನೀಡಿದೆ 
ನನ್ನ ಪ್ರೀತಿಯ ಸುರಿಮಾಲೆ 

ಈ ಉಯ್ಯಾಲೆಯ ತೂಗುತ 
ತೋರುವೆ ನಿನಗೆ ಬಾನಲಿರುವ ಬೆಳಕಿನ ಚುಕ್ಕಿಗಳನು 
ನಿನ್ನ ಗುಂಗಲ್ಲೇ ತೇಲಾಡುತ 
ನಿನಗಾಗೆ ಮುಡಿಪಿಡುವೆ ನಾ ಬರೆಯವ ಕವನಗಳನು  

Labels: ,