ನನ್ನ ಉಳಿಸುವೆಯ ಇನಿಯ?

ನಾ ಏನ ಮಾಡಿದೆ ನಿನಗೆ 
ನೀ ಹೀಗೇಕೆ ಮಾಡಿದೆ ಎನಗೆ 
ಬಲವಂತ ಮಾಡದ ಸಂಬಂಧವದು 
ನೀ ಏಕೆ ನನ್ನ ಪ್ರೀತಿಯಿಂದ ಕರೆದದು?

ಪ್ರೀತಿ ಎನ್ನಲೇ ಅದನ್ನ 
ಅಥವಾ ಬೇರೇನಾದರು ತಿಳಿಯಲ 
ಕಂಡೆ ನಾನು ನಿನ್ನ ಕಣ್ಣ
ಮಧ್ಯೆ ಸಿಲುಕಿಕೊಂಡೆ ನಾ ಸಂಬಂಧಗಳ ಸುಳಿಯ 

ಈ ಪ್ರೀತಿ ಎಂಬುದು ನಿಜವೇ 
ಅಥವಾ ನಮ್ಮ ಬಾಳಿನ ಸಜವೇ 
ಇದು ಸತ್ಯ ಅಸತ್ಯಗಳ ಆಟ 
ಅಥವಾ ನಾನು ನಿನಗೆ ಕೊಟ್ಟ ಕಾಟ?

ಪರನಾರಿ ಬಯಸಿದವನಲ್ಲ ನಾ 
ನಿನ್ನ ಕಂಡ ಕ್ಷಣದಿಂದ ನಾ 
ಬಯಸಿದೆ ನಿನ್ನೊಬ್ಬಳನೆ 
ಬಯಸದೆ ತಂದೆ ನೀ ನೋವು ಕಣೇ 

ನನ್ನ ಪ್ರೀತಿಯಲಿ ಏನಿತ್ತು ಕೊರತೆ 
ಎಲ್ಲಿ ತಪ್ಪಿತು ನನ್ನ ನಡತೆ 
ಏಕೆ ನೀ ನನ್ನ ಇರುವಿಕೆಯ ಮರೆತೆ 
ಸರಿ ಇರಲಿಲ್ಲವೇ ನನ್ನ ಘನತೆ?

ಬೇಡವಿದ್ದಲ್ಲಿ ಬಾಯಿ ಮಾತು ಸಾಕಿತ್ತು 
ನಾ ಏಕೆ ನಿನಗೆ ಬೇಕಿತ್ತು 
ಅಥವಾ ಬೇಕೆಂಬ ನಟನೆಯೋ 
ಇನ್ನು ಮುಗಿಯಲಾರದ ಸಂಕಟವೋ 

ಜೋತೆಯಲಿದ್ದರೂ ಕಾಡುತಿಹೆ ಇತಿಹಾಸ 
ಎಷ್ಟು ಮಾಡಿದರು ಮರೆಯುವ ಸಾಹಸ 
ಹೇಳಲಾರೆ ಬಿಡಲಾರೆ ನನ್ನ ಭಾವನೆಯ 
ನಿಜವ ಹೇಳಿ ನನ್ನ ಉಳಿಸುವೆಯ ಇನಿಯ? 

Labels: ,