ನಿನ್ನ ಆಟಗಳನ್ನು ಬಲ್ಲವರು ಯಾರು
ಅದ ತಿಳಿಯಬಲ್ಲರಿಲ್ಲ ಇಲ್ಯಾರು
ನಿನ್ನ ನಿರ್ಧಾರಕೆ ತಲೆಬಾಗಬೇಕು ನಾವು
ಕರೆಯದೇ ಬಂದ ಸೌಭಾಗ್ಯವಿದು ಸಾವು
ಎಲ್ಲಿಯೋ ಒಂದು ಮರಣ
ಮತ್ತೆಲ್ಲೋ ಒಂದು ಜನನ
ಬಲು ಕ್ರೂರವೆನಿಸಿದರೂ ಈ ಆಟ
ಅದರೊಳಗೆ ಅಡಗಿಸಿದೆ ಒಂದು ಪಾಠ
ಎಲ್ಲರಿಗೂ ಒಳ್ಳೆಯ ಬುಧ್ಧಿ ಕೊಟ್ಟೆ
ಅದರೊಳಗೆ ಕಲ್ಮಶವ ಇಟ್ಟೆ
ನೀ ಸೃಷ್ಟಿಸಿದೆ ಜೀವನವೆಂಬ ಈ ಚಲನಚಿತ್ರ
ನೀನೆ ನಾಯಕ, ಖಳನಾಯಕನದು ನಿನದೆ ಪಾತ್ರ
ನಿನ್ನ ಇರುವಿಕೆಯನ್ನೇ ಪ್ರಶ್ನಿಸಿದವರು ನಾವು
ನಿನ್ನನೇ ಜಪಿಸುವೆವು ಆದಾಗ ನೋವು
ನಿನ್ನ ಮಾಯೆಗಳು ಹಲವಾರು
ಈ ನಿನ್ನ ಆಟದ ಮುಂದಿನ ಬಲಿ ಇನ್ಯಾರು?
Labels: Kannada, Poetry