ಬಹಳ ದಿನಗಳಿಂದ ಕಾತುರದಿ ಕಾದಿರುವ ದಿನ 
ಬರಲಿದೆ ಇನ್ನು ಕೆಲವು ಗಂಟೆಗಳಲ್ಲಿ 
ಹೊಸ ಆಸೆಗಳನ್ನು ಕಾಣುತಿಹೆ ನನ್ನ ಮನ 
ಬರುವೆಯ ಮತ್ತೆ ನನ್ನ ಸುಂದರ ಸ್ವಪ್ನಗಳಲ್ಲಿ 
ಶುರು ಮಾಡೋಣ ನಮ್ಮ ನವ ಪಯಣ 
ಬಾರದಿರಲಿ ಪರರು ನಮ್ಮ ನಡವೆ  
ಅದಕೆಂದೆ ಬರೆದಿರುವೆ ಈ ಕವನ 
ಎಲ್ಲ ನೆನಪುಗಳನ್ನು ಮರೆವೆ 
ಬೇಗ ಬರಲಿದೆ ಆ ಸುದಿನ 
ವಿಮಾನದಲ್ಲಿ ಕುಳಿತುಕೊಂಡು ಹೋಗೋಣ 
ಹೀಗೆ ಇರಲಿ ನಮ್ಮ ಪ್ರತಿದಿನ 
ನೀ ನನ್ನ ಪಕ್ಕದಲಿ, ಎದುರಿಗೆ ಗಗನಸಖಿಯ ನೋಡೋಣ 
 
Labels: Kannada, Poetry