ನನ್ನೊಳಗಿರುವ ನೋವುಗಳನ್ನು ಹೇಳಿಕೊಳ್ಳಬೇಕ
ಅಥವಾ ಹೇಳದೇ ಉಳಿಸಿಕೊಳ್ಳಬೇಕ
ಹೇಳಿದರೇನಾಗಬಹುದು
ಹೇಳದಿದ್ದರೇನಾಗಬಹುದು
ಉತ್ತರಗಳ ನಾನರಿಯೆ
ಈ ಯೋಚನೆಯು ಸರಿಯೇ
ಹೇಗೆ ಹಂಚಿಕೊಳ್ಳಲಿ ಆ ನೋವುಗಳನ್ನು
ಹೇಗೆ ಸಾರಲಿ ನಾ ಅವರೊಡನೆ ದ್ವೇಷವನ್ನು
ಹೇಗೆ ಮರೆಯಲಿ ಆ ಸುಂದರ ದಿನಗಳನ್ನು
ಹೇಗೆ ಅಡಗಿಸಲಿ ನನ್ನೊಳಗಿರುವ ಮಗುವನ್ನು
ನೋವಿಗಿಂತ ನಲಿವೇ ಬಲು ಚಂದ
ನಲಿವಿನಿಂದ ಅರಳಿತು ಎಲ್ಲರ ಮೊಗದ ಅಂದ
ನನ್ನೊಳಗೆ ಕಂಡೆ ಒಂದು ಪುಟ್ಟ ಕಂದ
ನನ್ನ ನೋಡಿ ಹೀಗೆ ನಗುತ ನಗಿಸುತಿರು ಎಂದವನೆಂದ!!
Labels: Kannada, Poetry