ಅಕ್ಷರಸ್ತ

ಲೇಖನಿ ಹಿಡಿದವರೆಲ್ಲ ಲೇಖಕರಲ್ಲ 
ಕತ್ತಿ ಹಿಡಿದವರೆಲ್ಲ ವೀರರಲ್ಲ 
ಕತ್ತಿಗಿಂತ ಹೆಚ್ಚು ಹಾನಿ ಮಾಡಬಹುದು ಲೇಖನಿ 
ಮಾತಿನಲ್ಲೇ ಮಾನಭಂಗ ಮಾಡುವ ಲೇಖನಿ 

ಪುಸ್ತಕ ಪ್ರಿಯನಾಗು ನೀ 
ವಿಚಾರಗಳ ತಿಳಿಯಲು 
ಕೈಯಲ್ಲಿ ತೆಗೆದುಕೋ ಲೇಖನಿ 
ನಿನ್ನ ವಿಷಯಗಳ ಸಾರಲು 

ಮಾತಿನಲ್ಲಿ ಮನ ಗೆಲ್ಲಬೇಕು 
ಹಿಂಸೆಯಿಂದ ದೇಶ ನಾಶವಗಬೇಕೆ?
ನಿನ್ನ ಸಹಿಯಲ್ಲೇ ಸಿಹಿ ಇರಬೇಕು 
ಮಾತಿನಲ್ಲಿ ಮನ ಮುರಿಯಬೇಕೆ?

ವಿದ್ಯೆಗಿಂತ ದೊಡ್ಡ ಶಸ್ತ್ರ ಇಲ್ಲ 
ಬಂದೂಕೆಂಬ ಅಸ್ತ್ರ ಬೇಕಿಲ್ಲ 
ಬನ್ನಿ ಆಗುವ ಎಲ್ಲರು ಅಕ್ಷರಸ್ತ 
ಮಾಡುವ ನಮ್ಮ ಮನ, ಮನೆ ಹಾಗು ದೇಶವನ್ನು ಸ್ವಸ್ಥ!  

Labels: ,