ಹೇಳದೇ ಉಳಿದ ಮಾತುಗಳು

ಹೇಳದೇ ಉಳಿದ ಮಾತುಗಳು 
ಬರೆಯದೇ ಉಳಿದ ಪದಗಳು 
ಜೋಡಿಸಿ ಬರೆಯಲೇ ನಾಕು ಸಾಲು 
ವರ್ಣಿಸಿ ಗೆಜ್ಜೆ ಧರಿಸಿದ ನಿನ್ನ ಕಾಲು 

ಧರಿಸದೇ ಹರಿದ ಬಟ್ಟೆಗಳು 
ಒಗೆಯದೇ ಹೋದ ಕಲೆಗಳು 
ಜೋಡಿಸಿ ಹೊಲಿಯಲೇ ನಿನಗೊಂದು ಸೀರೆ 
ಬರೆದು ಅದರಮೇಲೆ ತಂಪಾದ ಯಳನೀರೆ 

ಹೊಡೆಯದೇ ಬಿದ್ದ ಏಟುಗಳು 
ತಿಳಿಯದೇ ಅದ ನೋವುಗಳು 
ಮರೆತು ಮುಂದೆ ಸಾಗೋಣವೆ 
ಪ್ರೀತಿಯೇ ಮೇಲು ಎಂದು ಸಾರೋಣವೆ 

ತಿಳಿಯದೇ ಊಹಿಸಿದ ಯೋಚನೆಗಳು 
ಯೋಚಿಸದೇ ನುಡಿದ ಬೈಗುಳಗಳು 
ಬದಿಗಿಟ್ಟು ಮತ್ತೆ ನಕ್ಕರೆ ಚೆನ್ನ 
ಆ ನಗು ಹಬ್ಬಿಸಿದರೆ ಎಲ್ಲರ ಬಾಳು ಚಿನ್ನ!

Labels: ,